about-us

ನಮ್ಮ ಕುರಿತು

ಕುಂದನ್ ನಿಂದ ಮೈ ಗೋಲ್ಡ್ ಕಾರ್ಟ್ ಬಿಡುಗಡೆ

ಅತ್ಯಾಧುನಿಕ ಪ್ರವೃತ್ತಿಗಳು ಮತ್ತು ತಂತ್ರಜ್ಞಾನಕ್ಕೆ ಪೂರಕವಾಗಿ, ಕುಂದನ್ ಗೋಲ್ಡ್ ಈಗ ತನ್ನದೇ ಆದ ಸ್ವಂತ ಹೊಸ ಡಿಜಿಟಲ್ ಗೋಲ್ಡ್ ಮತ್ತು ಸಿಲ್ವರ್ ಪ್ಲಾಟ್ ಫಾರಂ-ಮೈಗೋಲ್ಡ್ ಕಾರ್ಟ್ ಪರಿಚಯಿಸುತ್ತಿದೆ. ಎಂ.ಜಿ.ಕೆ. ತನ್ನ ಗ್ರಾಹಕರಿಗೆ ಸುಲಭವಾಗಿ ಬಳಸಬಲ್ಲ ಇಂಟರ್ ಫೇಸ್ ಒದಗಿಸಲು ರೂಪಿಸಿದೆ, ಮತ್ತು ತನ್ನ ಗ್ರಾಹಕರಿಗೆ ಮಾರುಕಟ್ಟೆಗಳನ್ನು ವಿಶ್ಲೇಷಿಸಲು ವೈಯಕ್ತಿಕ ಹೂಡಿಕೆಯ ಪ್ಲಾನರ್ ಆಗಿ ಕೆಲಸ ಮಾಡಲು, ಚಿನ್ನ ಮತ್ತು ಬೆಳ್ಳಿಯ ರಿಯಲ್ ಟೈಮ್ ಬೆಲೆಗಳನ್ನು ವೀಕ್ಷಿಸಲು ಮತ್ತು ಚಿನ್ನ ಮತ್ತು ಬೆಳ್ಳಿಯಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ಹೂಡಿಕೆಗಳನ್ನು ಒಂದೇ ಪ್ಲಾಟ್ ಫಾರಂ ಮೇಲೆ ಕೈಬೆರಳ ಟ್ಯಾಪ್ ಮೂಲಕ ನಿರ್ವಹಿಸಲು ನೆರವಾಗುತ್ತದೆ. ಈ ಪ್ಲಾಟ್ ಫಾರಂ ಬ್ರೌಸರ್ ಗಳಲ್ಲಿ ಕಾರ್ಯ ನಿರ್ವಹಿಸುತ್ತದೆ ಮತ್ತು ಐಒಎಸ್ ಮತ್ತು ಆಂಡ್ರಾಯಿಡ್ ಗಳಲ್ಲಿಯೂ ದೊರೆಯುವ ಅತ್ಯುತ್ತಮವಾಗಿ ವಿನ್ಯಾಸಗೊಳಿಸಲಾದ ಆಪ್ ಲಭ್ಯವಿದ್ದು ಚಿನ್ನದಲ್ಲಿ ಆಸಕ್ತಿ ಹೊಂದಿರುವ ಎಲ್ಲ ಹೂಡಿಕೆದಾರರಿಗೂ ಲಭ್ಯವಿದೆ.

ಕುಂದನ್, ಚಿನ್ನದ ಆದ್ಯ ಪ್ರವರ್ತಕ

ಕುಂದನ್ ರಿಫೈನರಿ ಪ್ರೈ.ಲಿ. ಕಳೆದ 2 ದಶಕಗಳಿಗೂ ಮೇಲ್ಪಟ್ಟು ಚಿನ್ನದ ಉದ್ಯಮದಲ್ಲಿ ಪ್ರಖ್ಯಾತ ಮತ್ತು ಪ್ರತಿಷ್ಠಿತ ಹೆಸರಾಗಿದೆ ಮತ್ತು ಗಣಿಗಾರಿಕೆ, ಶುದ್ಧೀಕರಣ, ವಿನ್ಯಾಸ ಮತ್ತು ಉತ್ಪಾದನೆ ಒಳಗೊಂಡಂತೆ ಚಿನ್ನದ ಮೌಲ್ಯ ಸರಣಿಯ ಎಲ್ಲ ಘಟಕಗಳಲ್ಲೂ ತನ್ನ ವ್ಯಾಪ್ತಿ ವಿಸ್ತರಿಸಿದೆ. ಕುಂದನ್ ರಿಫೈನರಿಯು ಹಲವು ವರ್ಷಗಳಿಂದ ತಮ್ಮ ತಂತ್ರಜ್ಞಾನ, ಪ್ರಾಯೋಗಿಕ ಜ್ಞಾನ, ಹಿಂಬದಿಯ ತಂಡಗಳು, ಪ್ರಕ್ರಿಯೆಗಳು ಮತ್ತು ವಿನ್ಯಾಸದ ಪ್ರಭಾವಳಿಯನ್ನು ಅಪ್ ಗ್ರೇಡ್ ಮಾಡಿಕೊಳ್ಳುವ ಮೂಲಕ ಸತತವಾಗಿ ಸುಧಾರಿಸಿಕೊಳ್ಳುತ್ತಿದೆ.

ಡಿಜಿಟಲ್ ಚಿನ್ನ

ಡಿಜಿಟಲೈಸೇಷನ್ ಜೀವನದ ಪ್ರತಿಯೊಂದು ಹಂತವನ್ನೂ ವ್ಯಾಪಿಸುತ್ತಿರುವುದರೊಂದಿಗೆ, ಹೊಸದಾದ ಹೆಚ್ಚು ಸಮರ್ಥ ಆದರೆ ಸರಳೀಕರಿಸಿದ ಹೂಡಿಕೆಗಳ ವಿಧಾನಗಳು ಹಲವು ವರ್ಷಗಳಿಂದ ವಿಸ್ತರಿಸಿವೆ. ಅಂತಹ ಒಂದು ಹೂಡಿಕೆ ಡಿಜಿಟಲ್ ಚಿನ್ನ ಮತ್ತು ಬೆಳ್ಳಿ, ಅದು ತಮ್ಮ ಪೋರ್ಟ್ ಫೋಲಿಯೋ ವಿಸ್ತಾರಗೊಳಿಸುವ ಮತ್ತು ಸುರಕ್ಷಿತಗೊಳಿಸಲು ನಿರೀಕ್ಷಿಸುವ ಹೂಡಿಕೆದಾರರಿಗೆ ಒತ್ತಡ-ರಹಿತ, ಪಾರದರ್ಶಕ ಮತ್ತು ವೆಚ್ಚ ಉಳಿಸುವ ಆಯ್ಕೆಯಾಗಿ ಬೆಳೆದಿದೆ.

vision

ಗುರಿ

ಎಂ.ಜಿ.ಕೆ. ಈ ತೀವ್ರ ಏರಿಳಿತಗಳ ಸಮಯದಲ್ಲಿ ವೈಯಕ್ತಿಕ ಹೂಡಿಕೆಯ ಪ್ಲಾನರ್ ಆಗಿಸಲು ಚಿನ್ನ/ಬೆಳ್ಳಿಯ ವ್ಯಾಪಾರ ಮತ್ತು ಹೂಡಿಕೆಯನ್ನು ಎಲ್ಲರಿಗೂ ಒತ್ತಡರಹಿತ, ಕೈಗೆಟುಕುವ ಮತ್ತು ಲಾಭದಾಯಕ ಪ್ರಕ್ರಿಯೆಯಾಗಿಸಲು ಪ್ರಯತ್ನಿಸುತ್ತಿದೆ.

ಎಂ.ಜಿ.ಕೆ. ಏನು ಮಾಡುತ್ತದೆ?

ಎಂ.ಜಿ.ಕೆ. ಅತ್ಯಂತ ಸಮರ್ಥ ಮತ್ತು ವೆಚ್ಚ ಉಳಿಸುವ ಚಿನ್ನದ ಹೂಡಿಕೆಯ ಪರಿಣಾಮಕಾರಿ ವಿಧಾನವಾಗಿದ್ದು ನಿಮ್ಮ ಉಳಿತಾಯವನ್ನು ಇಂದಿನ ದಿನ ಮತ್ತು ಕಾಲದಂತೆ ಪಡೆಯಲು ಅವಕಾಶ ನೀಡುತ್ತದೆ.

about buy
ಕೊಳ್ಳಿರಿ

ಎಲ್ಲಿಂದಲೇ ಆದರೂ, ಯಾವುದೇ ಸಮಯದ‍ಲ್ಲಿ ಎಂ.ಜಿ.ಕೆ. ವೆಬ್ ಸೈಟ್ ಮೇಲೆ ಅಥವಾ ಆಪ್ ಮೇಲೆ ಕ್ಲಿಕ್ ಮಾಡಿ ಚಿನ್ನ/ಬೆಳ್ಳಿ ಕೊಳ್ಳಿರಿ.

about gift
ಉಡುಗೊರೆ

ನಿಮ್ಮ ಪ್ರೀತಿಪಾತ್ರರಿಗೆ ಚಿನ್ನ/ಬೆಳ್ಳಿಯ ಸಿರಿಯನ್ನು ಉಡುಗೊರೆ ನೀಡಿ.

about sell
ವಿಕ್ರಯಿಸಿ

ನಿಮ್ಮ ಡಿಜಿ ಗೋಲ್ಡ್/ಸಿಲ್ವರ್ ಅನ್ನು ಆನ್ ಲೈನ್ ನಲ್ಲಿ ನೀವು ಬಯಸಿದಾಗ ವಿಕ್ರಯಿಸಿ

about delivery
ಪೂರೈಕೆ

ಚಿನ್ನ ಅಥವಾ ಬೆಳ್ಳಿಯನ್ನು ಭೌತಿಕವಾಗಿ ನಿಮ್ಮ ಮನೆ ಬಾಗಿಲಿಗೆ ನಿಗದಿಪಡಿಸಲಾದ ಸಮಯದಲ್ಲಿ ಪೂರೈಸಲಾಗುತ್ತದೆ.

about redeem
ಹಿಂಪಡೆಯಿರಿ

ಕ್ರೋಢೀಕರಿಸಿದ ಚಿನ್ನ ಅಥವಾ ಬೆಳ್ಳಿಯನ್ನು ನಮ್ಮ ಆನ್ ಲೈನ್ ಮತ್ತು ಆಫ್ ಲೈನ್ ಪಾಲುದಾರರಿಂದ ಯಾವುದೇ ಸಮಯದಲ್ಲಿ ಹಿಂಪಡೆಯಲು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು.

about plan
ಎಂ.ಜಿ.ಕೆ. ಪ್ಲಾನ್ ಗಳು

ಕೈಗೆಟುಕುವ, ಲಾಕ್-ಇನ್ ಅವಧಿ ಇಲ್ಲದ ಚಿನ್ನ/ಬೆಳ್ಳಿ ಹೂಡಿಕೆಯ ಪ್ಲಾನ್ ಕ್ಲಿಕ್ ಮಾಡಿ ಆಯ್ಕೆ ಮಾಡಿಕೊಳ್ಳಿ ಮತ್ತು ಉಳಿದಿದ್ದನ್ನು ಎಂ.ಜಿ.ಕೆ.ಗೆ ಬಿಡಿ.

ಹೇಗೆ ಕೆಲಸ ಮಾಡುತ್ತದೆ

about how

ಆಂಡ್ರಾಯಿಡ್ ಮತ್ತು ಐಒಎಸ್ ಆಪ್ ಸ್ಟೋರ್ ಗಳಿಂದ ಮೈ ಗೋಲ್ಡ್ ಕಾರ್ಟ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ ಅಥವಾ ವೆಬ್ ಸೈಟ್ ಗೆ ಭೇಟಿ ಕೊಡಿ

about how

ನಿಮ್ಮ ಗುರುತನ್ನು ನೋಂದಾಯಿಸಿ ಮತ್ತು ಪರಿಶೀಲಿಸಿ

about how

24ಕೆ ಅಂದರೆ ಶೇ.99.99ರಷ್ಟು ಶುದ್ಧ ಚಿನ್ನ/ಬೆಳ್ಳಿಯನ್ನು ಡಿಜಿಟಲಿ ಒಂದೇ ಕ್ಲಿಕ್ ಮೂಲಕ ಕೊಳ್ಳಿರಿ ಅಥವಾ ವಿಕ್ರಯಿಸಿ

about how

ಭೌತಿಕ ಚಿನ್ನವನ್ನು ವಿಮೆ ಪಡೆಯಲಾದ ಶೇ.100ರಷ್ಟು ಸುರಕ್ಷಿತ ವಾಲ್ಟ್ ನಲ್ಲಿ ಸಂಗ್ರಹಿಸಿ

about how

ನಿಮಗೆ ಅನುಕೂಲವಾದಾಗ ಹಿಂಪಡೆಯಿರಿ

ಎಂ.ಜಿ.ಕೆ. ಏಕೆ?
ಶುದ್ಧತೆ, ಭದ್ರತೆ ಮತ್ತು ತಂತ್ರಜ್ಞಾನ

ನಾವು ಕಠಿಣ ಗುಣಮಟ್ಟದ ಪರೀಕ್ಷೆಗಳು, ಸತತವಾಗಿ ನಮ್ಮ ಇಂಟರ್ ಫೇಸ್ ಸುಧಾರಣೆ ಮತ್ತು ಬ್ಯಾಕೆಂಡ್ ಸಿಸ್ಟಂಗಳಿಂದ ನ್ಯಾವಿಗೇಷನ್ ಮತ್ತು ಟ್ರೇಡಿಂಗ್ ಪ್ರಕ್ರಿಯೆಯನ್ನು ಸುಲಭ, ಸಂಕೀರ್ಣರಹಿತ ಮತ್ತು ಸುರಕ್ಷಿತಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ನಾವು ನಮ್ಮ ಎಲ್ಲ ಗ್ರಾಹಕರ ದತ್ತಾಂಶದ ಎನ್ ಕ್ರಿಪ್ಷನ್ ಮತ್ತು ಸುರಕ್ಷತೆಗೆ ತಾಂತ್ರಿಕವಾಗಿ ಸುಧಾರಿತ ಸಾಫ್ಟ್ ವೇರ್ ಅನ್ನು ಬಳಸುತ್ತೇವೆ. ನಮ್ಮ ಗ್ರಾಹಕರ ಸಂಪತ್ತಿನ ಸುರಕ್ಷತೆ ಮತ್ತು ಭದ್ರತೆಯನ್ನು ದೃಢೀಕರಿಸಲು ನಮ್ಮ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಹಯೋಗಗಳನ್ನು ಪ್ರತಿಯೊಂದು ಹಂತದಲ್ಲೂ ಅಳವಡಿಸಲಾಗಿದೆ ಇದರಿಂದ ಅವರು ಪೂರ್ಣ ವಿಶ್ವಾಸ ಮತ್ತು ಭರವಸೆಯೊಂದಿಗೆ ಹೂಡಿಕೆ ಮಾಡಬಹುದು.

  • kundan

    ನಮ್ಮ ಉತ್ಪನ್ನಗಳ ನಿಶ್ಚಿತ ಶುದ್ಧತೆಗೆ, ನಾವು ನಮ್ಮ ಚಿನ್ನವನ್ನು ನೇರವಾಗಿ ಚಿನ್ನದ ಉದ್ಯಮದ ಪ್ರತಿಷ್ಠಿತ ಮುಂಚೂಣಿಯಲ್ಲಿರುವ ಕುಂದನ್ ರಿಫೈನರಿಯಿಂದ ಪಡೆಯುತ್ತೇವೆ.

  • brinks

    ನಮ್ಮ ಗ್ರಾಹಕರ ಎಲ್ಲ ಚಿನ್ನ/ಬೆಳ್ಳಿಯನ್ನು ಜಾಗತಿಕ ಮುಂಚೂಣಿಯ ಲಾಜಿಸ್ಟಿಕ್ಸ್ ಮತ್ತು ಸೇಫ್ ವಾಲ್ಟ್ ಪೂರೈಕೆದಾರರಾದ ನಮ್ಮ ಭದ್ರತೆಯ ಪಾಲುದಾರರಾದ ಬ್ರಿಂಕ್ಸ್(BRINKS) ನೀಡುವ ಅತ್ಯಂತ ಭದ್ರತೆಯ ವಾಲ್ಟ್ ಗಳಲ್ಲಿ ಸಂಗ್ರಹಿಸಲಾಗುತ್ತದೆ.

  • bvc

    ಸಾಗಣೆಯಲ್ಲಿ ಭದ್ರತೆ ಮತ್ತು ಸುರಕ್ಷತೆಯನ್ನು ದೃಢಪಡಿಸಲು ನಾವು ಭಾರತದಾದ್ಯಂತ ನಮ್ಮ ಡೆಲಿವರಿಗಳಿಗೆ ವಿಶ್ವಾಸಾರ್ಹ ಪಾಲುದಾರರಾದ ಬಿವಿಸಿ ಲಾಜಿಸ್ಟಿಕ್ಸ್ ಮೇಲೆ ಮಾತ್ರ ಭರವಸೆ ಹೊಂದಿದ್ದೇವೆ.