ಪದೇ ಪದೇ ಕೇಳಲಾಗುವ ಪ್ರಶ್ನೆಗಳು ( FAQs )

ಮೈಗೋಲ್ಡ್ ಕಾರ್ಟ್ ಕುಂದನ್ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ನಿಂದ ಆನ್ ಲೈನ್ ಪ್ಲಾಟ್ ಫಾರಂ ಆಗಿದೆ. ಇದು ಬಳಕೆದಾರರಿಗೆ ಯಾವುದೇ ಸಮಯದಲ್ಲಿ ಚಿನ್ನ ಕೊಳ್ಳಲು/ಮಾರಾಟ ಮಾಡಬಹುದು ಅಂದರೆ ಭಾರತದಲ್ಲಿ ಎಲ್ಲಿಂದಲೇ ಆದರೂ ಚಲನೆಯಲ್ಲೂ ಮತ್ತು ರೂ.1ರಷ್ಟು ಕಡಿಮೆ ಮತ್ತು ಗರಿಷ್ಠ ಯಾವುದೇ ಮಿತಿಯಿಲ್ಲದೆ* ಮೊಬೈಲ್ ಆಪ್ ಮೂಲಕ ಹಾಗೂ ವೆಬ್ ಸೈಟ್ ಮೂಲಕ ಚಿನ್ನ/ಬೆಳ್ಳಿಯನ್ನು ಕೊಳ್ಳುವ ಮತ್ತು ಮಾರಾಟ ಮಾಡುವ ಅವಕಾಶ ನೀಡುತ್ತದೆ.

ನಿಮ್ಮ ಮಿತ್ರರು ನಿಮಗೆ ನಮ್ಮ ಮೂಲಕ ಚಿನ್ನ ಅಥವಾ ಬೆಳ್ಳಿ ಕೊಳ್ಳಲು/ಮಾರಾಟ ಮಾಡಲು ಶಿಫಾರಸು ಮಾಡಿರುವುದು ಬಹಳ ಸಂತೋಷವಾಗಿದೆ. ಕುಂದನ್ ಗ್ರೂಪ್ ಕುರಿತು ಸಾಮಾನ್ಯ ಮಾಹಿತಿ www.kundangroup.com ಇಲ್ಲಿ ಲಭ್ಯವಿದೆ. ನೀವು ಕುಂದನ್ ಗ್ರೂಪ್ ನ ಡಿಜಿಟಲ್ ಚಿನ್ನದ ವಹಿವಾಟಿನ ಕುರಿತು ತಿಳಿಯಲು ಬಯಸಿದರೆ ನೀವು ದಯವಿಟ್ಟು ನಮ್ಮ ವೆಬ್ ಸೈಟ್ www.mygoldkart.com ಇಲ್ಲಿಗೆ ಭೇಟಿ ಕೊಡಿ.

ನಿಮ್ಮ ಫೋನ್ ನಲ್ಲಿ ಆಪ್ ಸ್ಟೋರ್ (ಆಂಡ್ರಾಯಿಡ್ ಬಳಕೆದಾರರಿಗೆ ಗೂಗಲ್ ಆಪ್ ಸ್ಟೋರ್ ಮತ್ತು ಐಒಎಸ್ ಬಳಕೆದಾರರಿಗೆ ಆಪಲ್ ಆಪ್ ಸ್ಟೋರ್)ಗೆ ಭೇಟಿ ಕೊಡಿ ಮತ್ತು “ಮೈಗೋಲ್ಡ್ ಕಾರ್ಟ್” ಅಪ್ಲಿಕೇಷನ್ ಗೆ ಹುಡುಕಿರಿ. ನೀವು ಸರಿಯಾದ ಆಪ್ ಡೌನ್ ಲೋಡ್ ಮಾಡುತ್ತಿದ್ದೀರಿ ಎಂದು ದೃಢೀಕರಿಸಿಕೊಳ್ಳಲು, ಕಾಣಿಸುವ ಲೋಗೋ ಮತ್ತೆ ಪರಿಶೀಲಿಸಿ ಮತ್ತು ಕುಂದನ್ ಗ್ರೂಪ್ ಟಿ.ಎಂ. ಪ್ರಕಟಿಸಿರುವುದನ್ನು ದೃಢಪಡಿಸಿಕೊಳ್ಳಿ.

ಈ ಕೆಳಕಂಡ ಸನ್ನಿವೇಶಗಳಲ್ಲಿ ಕೆ.ವೈ.ಸಿ. ಪಡೆಯುವುದು ಕಡ್ಡಾಯವಾಗಿದೆ:- ನೀವು ರೂ.1,99,000 ಮೇಲ್ಪಟ್ಟ ಮೌಲ್ಯದ ಚಿನ್ನ/ಬೆಳ್ಳಿಯನ್ನು ಕೊಳ್ಳುವಾಗ - ರೂ.1,99,000 ಮೇಲ್ಪಟ್ಟ ಮೌಲ್ಯದ ಚಿನ್ನ/ಬೆಳ್ಳಿ ಆಭರಣ, ನಾಣ್ಯ ಅಥವಾ ಗಟ್ಟಿ ಆರ್ಡರ್ ಮಾಡುವ/ಕೊಳ್ಳಲು ಬಯಸಿದಾಗ -ರೂ.1,99,000 ಮೇಲ್ಪಟ್ಟ ಮೌಲ್ಯದ ಚಿನ್ನ/ಬೆಳ್ಳಿ ಆಭರಣ, ನಾಣ್ಯ ಅಥವಾ ಗಟ್ಟಿಯನ್ನು ಮಾರಾಟ ಮಾಡುವಾಗ - ನೀವು ರೂ.1,99,000 ವ್ಯಾಲೆಟ್ ಮಿತಿಯನ್ನು ತಲುಪಿದಾಗ

ಹೌದು, ಹಲವಾರು ಕಾರಣಗಳಿಗೆ ನಮ್ಮೊಂದಿಗೆ ನಿಮ್ಮ ಹೂಡಿಕೆ 100% ಸುರಕ್ಷಿತವಾಗಿರುತ್ತವೆ ಎನ್ನುವುದರ ಭರವಸೆ ಇರಿಸಿ. ಮೊದಲಿಗೆ, ಮೈಗೋಲ್ಡ್ ಕಾರ್ಟ್ ಆಪ್ ಮೂಲಕ ಮಾಡುವ ಎಲ್ಲ ಹೂಡಿಕೆಗಳ ಸುಪರ್ದು ಮೂರನೇ ಪಕ್ಷ/ಸ್ವತಂತ್ರ ಟ್ರಸ್ಟೀ ಅವರಲ್ಲಿರುತ್ತದೆ. ಎರಡನೆಯದು, ಕೊಳ್ಳಲಾದ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾನ್ಯತೆಯ ಏಜೆನ್ಸಿ ಬ್ರಿಂಕ್ಸ್ ಸುರಕ್ಷಿತವಾಗಿ ಸಂರಕ್ಷಿಸುತ್ತದೆ. ಮತ್ತು ಮೂರನೆಯದು, ಆಪ್ ಮೂಲಕ ಎಲ್ಲ ವಹಿವಾಟುಗಳೂ ಅತ್ಯಂತ ಸುರಕ್ಷಿತ ಮತ್ತು ಎನ್ಕ್ರಿಪ್ಟೆಡ್ ಆಗಿದ್ದು ಗ್ರಾಹಕರಿಗೆ ಮಾತ್ರ ಆತ/ಆಕೆಯ ಖಾತೆಯ ಬಳಕೆ ಸಾಧ್ಯವಾಗುತ್ತದೆ. ಅಲ್ಲದೆ, ಪ್ರತಿ ಕೊಳ್ಳುವಿಕೆ/ಮಾರಾಟದ ನಂತರ, ನೀವು ಈ ಕೆಳಕಂಡ ದಾಖಲೆಗಳನ್ನು ಸ್ವೀಕರಿಸುವುದನ್ನು ನಿರೀಕ್ಷಿಸಬಹುದು: 1.ಮೈಗೋಲ್ಡ್ ಪ್ಲಾಟ್ ಫಾರಂ ಬಳಸಿ ಕೊಳ್ಳಲಾದ/ಮಾರಾಟ ಮಾಡಿದ ಚಿನ್ನ/ಬೆಳ್ಳಿ ಮೊತ್ತ ಮತ್ತು ಪ್ರಮಾಣ ನಮೂದಿಸಿದ ಜಿ.ಎಸ್.ಟಿ./ತೆರಿಗೆ ಇನ್ವಾಯ್ಸ್ 2. ಮೂರನೇ ಪಕ್ಷದ ಟ್ರಸ್ಟೀ ನೀಡಲಾದ ಪ್ರಮಾಣಪತ್ರ, ಈ ಪ್ರಕರಣದಲ್ಲಿ ಗ್ರಾಹಕರು ನಡೆಸಿದ ವಹಿವಾಟಿನ ಕೊಂಡ/ಮಾರಾಟ ಮಾಡಿದ ಐಡಿಬಿಐ ಬ್ಯಾಂಕ್ ಪ್ರಮಾಣೀಕರಿಸಿದ ವಿವರಗಳು. ಗ್ರಾಹಕರ ಹೂಡಿಕೆಗಳ ಸುರಕ್ಷತೆಗೆ ಐಡಿಬಿಐ ಬ್ಯಾಂಕ್ ಸ್ವತಂತ್ರ ಟ್ರಸ್ಟೀಯಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಗ್ರಾಹಕರ ಪರವಾಗಿ ಕೆಲಸ ಮಾಡುವುದನ್ನು ನಿರೀಕ್ಷಿಸುತ್ತದೆ ಮತ್ತು ಅವರ ಹಿತಾಸಕ್ತಿಗಳು ಸಂರಕ್ಷಣೆಯಾಗಿರುವುದನ್ನು ದೃಢಪಡಿಸುತ್ತದೆ. ಐಡಿಬಿಐ ಬ್ಯಾಂಕ್ ಟ್ರಸ್ಟೀಗೆ ಗ್ರಾಹಕರು ಕೊಂಡಿರುವ ಬುಲಿಯನ್(ಅಂದರೆ ಚಿನ್ನ/ಬೆಳ್ಳಿ)ನ ಮೊದಲ ಹಾಗೂ ವಿಶೇಷ ಜವಾಬ್ದಾರಿ ಇರುತ್ತದೆ. ನಿಯಮ ಹಾಗೂ ನಿಬಂಧನೆಗಳನ್ನು ಒಪ್ಪಿಕೊಂಡ ನಂತರ ಗ್ರಾಹಕರು ಕುಂದನ್ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಗೆ ಗ್ರಾಹಕರ ಪರವಾಗಿ ಭೌತಿಕ ಬುಲಿಯನ್ ಅನ್ನು ಸುರಕ್ಷಿತ ವಾಲ್ಟ್ ಗೆ ಪೂರೈಸಲು ಅನುಮತಿ ನೀಡುತ್ತಾರೆ ಅದನ್ನು ಸ್ವತಂತ್ರ ಟ್ರಸ್ಟೀ ಪರಿಶೀಲಿಸುತ್ತಾರೆ.

ಚಿಂತಿಸಬೇಡಿ; ನೀವು ಮಾಡಬೇಕಾದುದು ಇಷ್ಟೇ, ಮೈಗೋಲ್ಡ್ ಕಾರ್ಟ್ ಪ್ಲಾಟ್ ಫಾರಂಗೆ ಮೊಬೈಲ್ ಅಥವಾ ವೆಬ್ ಅಪ್ಲಿಕೇಷನ್ ಮೂಲಕ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಬಳಸಿ ಲಾಗಿನ್ ಆಗಿರಿ. ನಿಮ್ಮಿಂದ ನಿಮ್ಮ ಮೈಗೋಲ್ಡ್ ಕಾರ್ಟ್ ಖಾತೆಗೆ ಆಗಿರುವ ಎಲ್ಲ ಹಿಂದಿನ ವಹಿವಾಟುಗಳ ಇನ್ ವಾಯ್ಸ್ ಗಳು/ಪ್ರಮಾಣಪತ್ರಗಳನ್ನು ನೋಡಲು `ಹಿಸ್ಟರಿ’ ವಿಭಾಗಕ್ಕೆ ಭೇಟಿ ನೀಡಿ. ನೀವು ಹುಡುಕುತ್ತಿರುವ ಮಾಹಿತಿ ಇನ್ನೂ ದೊರೆಯದೇ ಇದ್ದಲ್ಲಿ ನಮಗೆ customercare@mygoldkart.com ಇಲ್ಲಿಗೆ ಬರೆಯಿರಿ ಅಥವಾ ನಮ್ಮ ಗ್ರಾಹಕಸೇವಾ ಸಂಖ್ಯೆ 1800xxxxxxxxಗೆ ಕರೆ ಮಾಡಿ.

ಕುಂದನ್ ಗೋಲ್ಡ್ ಟ್ರೇಡಿಂಗ್ ಉದ್ಯಮದಲ್ಲಿ ಪ್ರತಿಷ್ಠಿತ ಮತ್ತು ಖ್ಯಾತಿ ಪಡೆದ ಹೆಸರಾಗಿದೆ. ನಮ್ಮಿಂದ ಮಾರಾಟವಾಗುವ ಎಲ್ಲ ಉತ್ಪನ್ನಗಳು ಹಾಲ್ ಮಾರ್ಕ್ ಹೊಂದಿರುತ್ತವೆ ಮತ್ತು ಎನ್.ಎ.ಬಿ.ಎಲ್. ಮಾನ್ಯತೆಯ ಪ್ರಯೋಗಾಲಯದ ಪ್ರಮಾಣಪತ್ರ ಹೊಂದಿರುತ್ತವೆ ಮತ್ತು ನಾವು ಬಿ.ಐ.ಎಸ್ ಮಾನ್ಯತೆಯನ್ನೂ ಪಡೆದಿದ್ದೇವೆ. ನೀವು www.mygoldkart.com ನಲ್ಲಿ ಈ ಪ್ರಮಾಣೀಕರಣವನ್ನು ಕಾಣಬಹುದು. ಅಲ್ಲದೆ, ನಮ್ಮದೇ ಸ್ವಂತ ಚಿನ್ನ/ಬೆಳ್ಳಿ ಆಭರಣ, ನಾಣ್ಯಗಳು ಮತ್ತು ಗಟ್ಟಿಗಳ ಮೇಲೆ ಯಾವುದೇ ಸಮಯದಲ್ಲಿ 100% ಕ್ಯಾಶ್ ಬ್ಯಾಕ್ ನೀಡುತ್ತೇವೆ.

ಚಿನ್ನ/ಬೆಳ್ಳಿಯ ಭೌತಿಕ ಪೂರೈಕೆಯಾದ ಪಕ್ಷದಲ್ಲಿ ನೀವು ದೇಶಾದ್ಯಂತ ಹರಡಿರುವ ನಮ್ಮ ಮಳಿಗೆಗಳ ಜಾಲಕ್ಕೆ ಭೇಟಿ ನೀಡಬಹುದು ಮತ್ತು ಅದನ್ನು ನಿಮ್ಮ ಆಯ್ಕೆಯಂತೆ ಆಭರಣ, ನಾಣ್ಯ ಅಥವಾ ಗಟ್ಟಿಗೆ ಹಿಂಪಡೆಯಬಹುದು. ನಗದು ಅಥವಾ ಇ-ವ್ಯಾಲೆಟ್ ಮೂಲಕ ಹಿಂಪಡೆಯುವುದು ಕೂಡಾ ಸಾಧ್ಯವಿದೆ ಎಂದು ನಾವು ನಿಮಗೆ ಮಾಹಿತಿ ನೀಡಲು ಬಯಸುತ್ತೇವೆ. ಈಗ, ನಿಮ್ಮ ಡೆಲಿವರಿಯು ಇನ್ನೂ ಏಜೆನ್ಸಿಯಲ್ಲಿ ಇದ್ದರೆ ನೀವು ಅದನ್ನು ಡಿಜಿಟಲ್ ಪ್ಲಾಟ್ ಫಾರಂ ಮೂಲಕ ಕೂಡಾ ಮಾರಾಟ ಮಾಡಲು ಆಯ್ಕೆ ಮಾಡಿಕೊಳ್ಳಬಹುದು.

ನಮ್ಮ ಪ್ಲಾಟ್ ಫಾರಂನಲ್ಲಿ ಕೊಳ್ಳುವುದು ಅಥವಾ ಮಾರಾಟ ಮಾಡುವುದು ಏಕೆ ನಿಮಗೆ ಅನುಕೂಲಕರ ಎನ್ನುವುದಕ್ಕೆ ಅಸಂಖ್ಯ ಕಾರಣಗಳಿವೆ ಮತ್ತು ಅವುಗಳಲ್ಲಿ ಕೆಲವನ್ನು ನಿಮಗಾಗಿ ಇಲ್ಲಿ ನೀಡಿದ್ದೇವೆ: -ನೀವು ರೂ.1ರಷ್ಟು ಕಡಿಮೆಯಲ್ಲಿ ಮತ್ತು ಲಕ್ಷಾಂತರ ರೂಪಾಯಿಗಳಲ್ಲಿ ತಕ್ಷಣವೇ ಅಲ್ಲದಿದ್ದರೂ ಕೆಲವೇ ಸೆಕೆಂಡುಗಳಲ್ಲಿ ಕೊಳ್ಳಬಹುದು. - ಮೈಗೋಲ್ಡ್ ಕಾರ್ಟ್ ನೊಂದಿಗೆ ನೀವು ನೋಂದಣಿ ಮಾಡಿಕೊಳ್ಳುವುದು ನಿಮಿಷಗಳು ಮಾತ್ರ ತೆಗೆದುಕೊಳ್ಳುತ್ತದೆ, ಖಾತೆ ತೆರೆಯಿರಿ ಮತ್ತು ಚಿನ್ನ ಕೊಳ್ಳಿರಿ; ಎಲ್ಲವನ್ನೂ ತಡೆರಹಿತ ವಿಧಾನದಲ್ಲಿ. - ಡಿಜಿಟಲ್ ಚಿನ್ನವು ಅದನ್ನು ಕೊಂಡ ಕೂಡಲೇ ಭೌತಿಕ ಚಿನ್ನವಾಗಿ ಪರಿವರ್ತನೆಯಾಗುತ್ತದೆ ಮತ್ತು ಅದನ್ನು ಪ್ರತಿಷ್ಠಿತ ಮೂರನೇ ಪಕ್ಷದವರಲ್ಲಿ ಸುರಕ್ಷಿತವಾಗಿ ಇರಿಸಲಾಗುತ್ತದೆ. - ಯಾವುದೇ ಮೊತ್ತವಿರಲಿ ನೀವು ನಿಮ್ಮ ಮಾರಾಟ/ಕೊಳ್ಳುವಿಕೆಗೆ ತಕ್ಷಣವೇ ರಸೀದಿ/ಇನ್ವಾಯ್ಸ್ ಪಡೆಯುತ್ತೀರಿ. - ಕೊಳ್ಳಲಾದ ಭೌತಿಕ ಚಿನ್ನ/ಬೆಳ್ಳಿಯನ್ನು ನಿಮ್ಮ ಮನೆಬಾಗಿಲಿನಲ್ಲಿ ಪೂರೈಸಲಾಗುತ್ತದೆ ಮತ್ತು ಅತ್ಯಂತ ನಾಮಮಾತ್ರ ಡೆಲಿವರಿ ಶುಲ್ಕಗಳನ್ನು ಹೊಂದಿರುತ್ತದೆ. - ಪ್ರಸ್ತುತದ ಬೆಲೆಗಳಲ್ಲಿ ಯಾವುದೇ ಸಮಯದಲ್ಲಿ ಬೈ ಬ್ಯಾಕ್ ಸ್ಕೀಂ ಕೂಡಾ ಆಯ್ಕೆ ಮಾಡಿಕೊಳ್ಳಬಹುದು. - ನೀವು ಡಿಜಿಟಲ್ ಚಿನ್ನವನ್ನು ಆಭರಣ, ನಾಣ್ಯಗಳು ಅಥವಾ ಗಟ್ಟಿಗಳಾಗಿ ನಮ್ಮ ದೇಶಾದ್ಯಂತ ಇರುವ ನಿಮ್ಮ ಆದ್ಯತೆಯ ಯಾವುದೇ ಮಳಿಗೆ/ಡೀಲರ್ ಜಾಲದಲ್ಲಿ ಹಿಂಪಡೆಯಬಹುದು. -ಚಿನ್ನ/ಬೆಳ್ಳಿ ವಿಷಯಕ್ಕೆ ಬಂದರೆ ಕುಂದನ್ ನಿಮಗೆ ಅತ್ಯಂತ ಹೆಚ್ಚು ಶುದ್ಧತೆ ಮತ್ತು ಗುಣಮಟ್ಟದ(ಹಾಲ್ ಮಾರ್ಕ್ ಮತ್ತು ಬಿಐಎಸ್ ಪ್ರಮಾಣೀಕೃತ) ಭರವಸೆ ನೀಡುತ್ತದೆ. - ನಗದು ಅಥವಾ ಇ-ವ್ಯಾಲೆಟ್ ಮೇಲೆ ವಿಶೇಷ ಹಿಂಪಡೆಯುವಿಕೆ ಕೂಡಾ ಲಭ್ಯ - ಡಿಜಿಟಲ್ ಚಿನ್ನ ನಿಮಗೆ ಎಲ್ಲ ನಗದು ನಿರ್ವಹಣೆಯ ಅಡೆತಡೆಗಳಿಂದ ಮುಕ್ತವಾಗಿಸುತ್ತದೆ. -ಡಿಜಿಟಲ್ ಚಿನ್ನವು ನಿಮಗೆ ಚಿನ್ನ/ಬೆಳ್ಳಿ ಆಭರಣ, ನಾಣ್ಯ ಅಥವಾ ಗಟ್ಟಿಯನ್ನು ಮಿತ್ರರು, ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಕೊಳ್ಳಲು ಮತ್ತು ಉಡುಗೊರೆ ನೀಡಲು ಅವಕಾಶ ನೀಡುತ್ತದೆ. - ಮೈಗೋಲ್ಡ್ ಕಾರ್ಟ್ ಮೂಲಕ ನೀವು ಬರೀ ಉಡುಗೊರೆ ನೀಡುವುದಲ್ಲ ನೀವು ಅವುಗಳನ್ನು ಸ್ವೀಕರಿಸಲೂಬಹುದು. - ಚಿನ್ನ ಅಥವಾ ಬೆಳ್ಳಿಯ ಆಭರಣ, ನಾಣ್ಯಗಳು ಮತ್ತು ಗಟ್ಟಿಗಳನ್ನು ಮಳಿಗೆಗೆ ನೀವು ಭೇಟಿ ನೀಡದೆ ನಿಮ್ಮ ಮನೆಯಲ್ಲಿಯೇ ಕುಳಿತು ಕೊಳ್ಳುವ ಅನುಕೂಲವನ್ನು ಊಹಿಸಿಕೊಳ್ಳಿ. ಇದು ನಿಮ್ಮ ಕಾರ್ಯದೊತ್ತಡಕ್ಕೆ ಅತ್ಯಂತ ಪರಿಪೂರ್ಣವಾಗಿ ಹೊಂದಿಕೊಳ್ಳುತ್ತದೆ.

ದಿನದ ಪ್ರತಿ ಗಂಟೆ, ವಾರದ ಪ್ರತಿದಿನ, ತಿಂಗಳ ಪ್ರತಿ ವಾರ ಮತ್ತು ವರ್ಷದ ಪ್ರತಿ ತಿಂಗಳು! ನಾವು ನಿಮ್ಮ ಸೇವೆಗೆ 24*7*365 ಲಭ್ಯವಿರುತ್ತೇವೆ.

ನಿಮ್ಮಲ್ಲಿ ಬೇಸಿಕ್ ಸ್ಮಾರ್ಟ್ ಫೋನ್ ಅಥವಾ ಡೆಸ್ಕ್ ಟಾಪ್ , ಸ್ಥಿರವಾದ ಇಂಟರ್ನೆಟ್ ಸಂಪರ್ಕ, ಮೌಲಿಕ ಇ-ಮೇಲ್ ಐ.ಡಿ. ಮತ್ತು ಫೋನ್ ನಂಬರ್ ಇದ್ದಲ್ಲಿ ನೀವು ಮೈಗೋಲ್ಡ್ ಕಾರ್ಟ್ ಪ್ಲಾಟ್ ಫಾರಂ ಖಾತೆ ತೆರೆಯಬಹುದು.

ನಮ್ಮ ವೆಬ್ ಸೈಟ್ www.mygoldkart.com ಗೆ ಭೇಟಿ ನೀಡುವ ಮೂಲಕ ಪ್ರಾರಂಭಿಸಿ. ಲಾಗಿನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿರಿ. ನೀವು ಹೊಸ ಬಳಕೆದಾರರಾಗಿರುವುದರಿಂದ ಸೈನ್ ಮಿ ಅಪ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿರಿ ಮತ್ತು ನಿಮ್ಮ ಪೂರ್ಣ ಹೆಸರು(ಅಂದರೆ ಮೊದಲ ಹೆಸರು, ಮಧ್ಯದ ಹೆಸರು ಮತ್ತು ಕೊನೆಯ ಹೆಸರು), ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ ಒಳಗೊಂಡು ಅಗತ್ಯ ವಿವರಗಳನ್ನು ನೀಡಿ. ಎಲ್ಲ ಅಗತ್ಯ ಮಾಹಿತಿಯನ್ನು ಸಲ್ಲಿಸಿದ ನಂತರ ಮೈಗೋಲ್ಡ್ ಕಾರ್ಟ್ ನೊಂದಿಗೆ ನಿಮ್ಮ ನೋಂದಣಿ ದೃಢೀಕರಿಸಿದ ಸ್ಕ್ರೀನ್ ಕಾಣುತ್ತದೆ. ಈಗ ನೀವು ಕೊಳ್ಳಲು ಸಿದ್ಧರು. ನೀವು ಯಾವುದೇ ಸಮಯದಲ್ಲಿ ನಿಮ್ಮ ಖಾತೆಗೆ ಲಾಗಿನ್ ಆಗಬಹುದು ಮತ್ತು ಈ ಕೆಳಕಂಡ ಯಾವುದೇ ಪಾವತಿಯ ಮಾದರಿಗಳನ್ನು ಬಳಸಿ ಚಿನ್ನ ಅಥವಾ ಬೆಳ್ಳಿ ಕೊಳ್ಳಬಹುದು/ಮಾರಬಹುದು: -ಇಂಟರ್ ನೆಟ್ ಬ್ಯಾಂಕಿಂಗ್(ಯಾವುದೇ ಬ್ಯಾಂಕ್) -ರುಪೇ -ಡೆಬಿಟ್ ಕಾರ್ಡ್ -ಯುಪಿಐ -ಮೊಬೈಲ್ ವ್ಯಾಲೆಟ್ ಗಳಾದ ಮೊಬಿಕ್ವಿಕ್, ಪೇಜಾಪ್, ಭೀಮ್ ಆಪ್, ಗೂಗಲ್ ಪೇ, ಪೇಟಿಎಂ, ಫೋನ್ ಪೆ ಇತ್ಯಾದಿ. -ಕ್ರೆಡಿಟ್ ಕಾರ್ಡ್ ಗಳು - ಇಎಂಐ ಕಾರ್ಡ್ ಗಳು

ಯಾವುದೇ ಸಂದರ್ಭದಲ್ಲಿ ನೀವು ನಿಮ್ಮ ಖಾತೆಯ ಪಾಸ್ ವರ್ಡ್ ಮರೆತು ಹೋದರೆ ನೀವು ಲಾಗಿನ್ ಪುಟಕ್ಕೆ ಹೋಗಬೇಕು ಮತ್ತು ‘ಫರ್ಗಾಟ್ ಪಾಸ್ ವರ್ಡ್’ ಗುಂಡಿಯನ್ನು ಒತ್ತಬೇಕು. ಅದು ನಂತರ ಪಾಸ್ ವರ್ಡ್ ರಿಸೆಟ್ ಮಾಡುವ ಹಂತ ಹಂತವಾದ ಪ್ರಕ್ರಿಯೆಯನ್ನು ನೀಡುತ್ತದೆ.